ಬಾಕಿ ಗೌರವ ಸಂಭಾವನೆ ಬಿಡುಗಡೆಗೆ ಕೋರಿ ಹೈಕೋರ್ಟ್ ಮೊರೆ ಹೋದ ಕಸಾಪ ಮಾಜಿ ಅಧ್ಯಕ್ಷ ಮಹೇಶ್ ಜೋಶಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದ ಅವಧಿಯ ಮಾಸಿಕ ಗೌರವ ಸಂಭಾವನೆಯ ಬಾಕಿ ಪಡೆದುಕೊಳ್ಳಲು ಪರಿಷತ್ ಮಾಜಿ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಗೌರವ ಸಂಭಾವನೆಯ ಬಾಕಿ ಮೊತ್ತ ತಡೆ ಹಿಡಿದಿರುವ ಕ್ರಮ ಪ್ರಶ್ನಿಸಿ ಡಾ. ಮಹೇಶ್ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು‌.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪರಿಷತ್‌ ಆಡಳಿತಾಧಿಕಾರಿಯಾದ ಐಎಎಸ್ ಅಧಿಕಾರಿ ಕೆ.ಎ. ದಯಾನಂದ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.

ಮನವಿ ಏನು?
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ತಮಗೆ ಸಂಪುಟದ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿತ್ತು. ಅದರಂತೆ, ವೇತನ, ಸಂಭಾವನೆ ಇತರ ಭತ್ಯೆಗಳನ್ನು ನೀಡಲಾಗಿತ್ತು. 2025ರ ಅಕ್ಟೋಬರ್ 28ರವರೆಗೆ ನಾನು ಅಧಿಕಾರದಲ್ಲಿದೆ. ಆರ್ಥಿಕ ಹೊರೆ ತಪ್ಪಿಸಲು ಮಾಸಿಕ ಸಂಭಾವನೆ ಹೊರತುಪಡಿಸಿ ಬೇರೆ ಯಾವ ಭತ್ಯೆ, ಸೌಲಭ್ಯಗಳನ್ನು ಪಡೆದುಕೊಂಡಿಲ್ಲ. ಪ್ರಕರಣದ ಕಾರಣ ನೀಡಿ ಗೌರವ ಸಂಭಾವನೆ ತಡೆ ಹಿಡಿಯಲಾಗಿದೆ. ಆಡಳಿತಾಧಿಕಾರಿಗೆ ಅಂತಹ ಅಧಿಕಾರ ಇಲ್ಲ, ಈ ಬಗ್ಗೆ ಮನವಿ ನೀಡಿದರೂ ಪರಿಗಣಿಸಿಲ್ಲ. ಆದ್ದರಿಂದ, ಬಾಕಿ ಗೌರವ ಸಂಭಾವನೆ ಮೊತ್ತ ಬಿಡುಗಡೆ ಮಾಡುವಂತೆ ಆಡಳಿತಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಮಹೇಶ್ ಜೋಶಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Related Articles

Comments (0)

Leave a Comment