‘ಕಳಪೆ’ ವಿಭಾಗದಲ್ಲೇ ಮುಂದುವರಿದ ದೆಹಲಿಯಲ್ಲಿ ವಾಯು ಗುಣಮಟ್ಟ
- by Legal Samachar
- November 18, 2026
- 7 Views
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ವಾಯು ಗುಣಮಟ್ಟ ‘ಕಳಪೆ’ ವಿಭಾಗದಲ್ಲೇ ಮುಂದುವರಿದಿದ್ದು, ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 214ಕ್ಕೆ ಏರಿಕೆಯಾಗಿದೆ. ಮಂಗಳವಾರ ದಾಖಲಾಗಿದ್ದ 204ಕ್ಕೆ ಹೋಲಿಸಿದರೆ ಮಾಲಿನ್ಯ ಪ್ರಮಾಣ ಕೊಂಚ ಹೆಚ್ಚಾಗಿದೆ.
ದೆಹಲಿಯ 58 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳ ಪೈಕಿ 36 ಕೇಂದ್ರಗಳಲ್ಲಿ ‘ಕಳಪೆ’ ಹಾಗೂ 21 ಕೇಂದ್ರಗಳಲ್ಲಿ ‘ಮಧ್ಯಮ’ ಗುಣಮಟ್ಟ ದಾಖಲಾಗಿದೆ.
ಉತ್ತಮ್ ನಗರದಲ್ಲಿ ಗರಿಷ್ಠ 399 AQI ದಾಖಲಾಗಿದ್ದು, ‘ಅತಿ ಕಳಪೆ’ ವಿಭಾಗಕ್ಕೆ ತಲುಪಿದೆ. ಚಾಂದಿನಿ ಚೌಕ್ನಲ್ಲಿ 292, ಏಮ್ಸ್ ಪ್ರದೇಶದಲ್ಲಿ 278, ಪಂಜಾಬಿ ಬಾಗ್ನಲ್ಲಿ 258, ಜಹಾಂಗೀರ್ಪುರಿಯಲ್ಲಿ 257 ಹಾಗೂ ಐಐಟಿ ದೆಹಲಿ ಪ್ರದೇಶದಲ್ಲಿ 251 ಸೂಚ್ಯಂಕ ದಾಖಲಾಗಿದೆ.

ಹೆಚ್ಚು ಮಾಲಿನ್ಯಕ್ಕೆ ಹೆಸರಾದ ಆನಂದ್ ವಿಹಾರ್ನಲ್ಲಿ AQI 206ಕ್ಕೆ ದಾಖಲಾಗಿದೆ. ಮತ್ತೊಂದೆಡೆ, ಇಂಡಿಯಾ ಗೇಟ್ ಪ್ರದೇಶದಲ್ಲಿ 112, ಜವಾಹರಲಾಲ್ ನೆಹರು ಕ್ರೀಡಾಂಗಣದ ಬಳಿ 152 ಹಾಗೂ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 197 AQI ದಾಖಲಾಗಿದ್ದು, ಈ ಪ್ರದೇಶಗಳು ‘ಮಧ್ಯಮ’ ವಿಭಾಗದಲ್ಲಿವೆ.
ನವೆಂಬರ್ ಆರಂಭದಲ್ಲಿ ದೆಹಲಿಯ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ‘ಅತಿ ಕಳಪೆ’ ಮತ್ತು ‘ಗಂಭೀರ’ ಹಂತ ತಲುಪಿತ್ತು.


Comments (0)