ಒಂದೇ ಬಾರಿ 23 ಹೆಲಿಕಾಪ್ಟರ್ಗಳ ಹಾರಾಟ: ಭಾರತೀಯ ವಾಯುಪಡೆಯಿಂದ ಅಪರೂಪದ ಸಾಧನೆ
- by Legal Samachar
- November 18, 2026
- 8 Views
ನವದೆಹಲಿ: ಭಾರತೀಯ ವಾಯುಪಡೆಯ ಹಕೀಂಪೇಟೆಯ ವಾಯುನೆಲೆಯಲ್ಲಿರುವ ಹೆಲಿಕಾಪ್ಟರ್ ತರಬೇತಿ ಶಾಲೆ (Helicopter Training School) ಒಂದೇ ಬಾರಿ ತನ್ನ ಎಲ್ಲಾ 23 ಹೆಲಿಕಾಪ್ಟರ್ಗಳನ್ನು ಹಾರಿಸುವ ಮೂಲಕ ಅಪರೂಪದ ಸಾಧನೆ ಮಾಡಿದೆ.
ಶೇ.100ರಷ್ಟು ಕಾರ್ಯಾಚರಣಾ ಸನ್ನದ್ಧತೆ ಸಾಧಿಸಿದ ಹಿನ್ನೆಲೆಯಲ್ಲಿ ಈ ಪ್ರದರ್ಶನ ನಡೆಸಲಾಗಿದೆ. ವಾಯುಪಡೆಯ ಅತಿದೊಡ್ಡ ಹೆಲಿಕಾಪ್ಟರ್ ಘಟಕವಾಗಿರುವ ಈ ಶಾಲೆ, ತನ್ನ ಉನ್ನತ ನಿರ್ವಹಣಾ ಗುಣಮಟ್ಟ, ಸಿಬ್ಬಂದಿಯ ಸಮನ್ವಯ ಮತ್ತು ಅತ್ಯುತ್ತಮ ತರಬೇತಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

‘Gyanena Siddihi’ ಎಂಬ ಧ್ಯೇಯವಾಕ್ಯದೊಂದಿಗೆ ಜ್ಞಾನ ಮತ್ತು ತರಬೇತಿಯ ಮೂಲಕ ಸಾಮರ್ಥ್ಯ ಹಾಗೂ ಶ್ರೇಷ್ಠತೆ ಸಾಧಿಸುವುದನ್ನು ಘಟಕವು ಸಾರಿದೆ.
ಈ ಅಪರೂಪದ ಸಾಧನೆಯ ಚಿತ್ರವನ್ನು ಭಾರತೀಯ ವಾಯುಪಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.


Comments (0)