ಚಿಕ್ಕಣ್ಣ ಅಭಿನಯದ ‘ಲಕ್ಷ್ಮೀ ಪುತ್ರ’ ಚಿತ್ರದ ಟ್ರೇಲರ್ ಬಿಡುಗಡೆ
- by Legal Samachar
- November 18, 2026
- 10 Views
‘ಲಕ್ಷ್ಮೀ ಪುತ್ರ’ ಕನ್ನಡ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ವಿಜಯ್ ಎಸ್. ಸ್ವಾಮಿ ನಿರ್ದೇಶನದ ಈ ಚಿತ್ರದಲ್ಲಿ ಚಿಕ್ಕಣ್ಣ, ವಂದಿತಾ ಗೌಡ, ತಾರಾ ಅನುರಾಧಾ, ಕುರಿ ಪ್ರತಾಪ್, ಧರ್ಮಣ್ಣ, ಮನು, ಮಿತ್ರ, ಮಾಸ್ಟರ್ಪೀಸ್ ಅನಂತು ಹಾಗೂ ಮನೋಹರ್ ಗೌಡ ಅಭಿನಯಿಸಿದ್ದಾರೆ.
ಎ.ಪಿ. ಅರ್ಜುನ್ ಅವರ ಕಥೆ, ಸಾಹಿತ್ಯ ಮತ್ತು ಚಿತ್ರಕಥೆಯಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಅನ್ನಪೂರ್ಣ ಎ.ಪಿ. ಅರ್ಜುನ್ ಅವರು ಎ.ಪಿ. ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಿದ್ದಾರೆ. ರವಿಕಿರಣ್ ಎಂ. ಗೌಡ ಸಹ ನಿರ್ಮಾಪಕರಾಗಿದ್ದಾರೆ.

ಗಿರೀಶ್ ಆರ್. ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.


Comments (0)