2027ರ ಐಪಿಎಲ್ಗೆ ಮುಂಬೈ ಇಂಡಿಯನ್ಸ್ ನಾಯಕನಾಗಿ ರೋಹಿತ್ ಶರ್ಮಾ ಮರಳಿಕೆ!
- by Legal Samachar
- November 27, 2026
- 8 Views
ಮುಂಬೈ: 2027ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಮರಳಿದ್ದಾರೆ. ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ತಂಡವು ತನ್ನ 20ನೇ ಸೀಸನ್ಗಾಗಿ ನಾಯಕತ್ವದ ಜವಾಬ್ದಾರಿಯನ್ನು ಮತ್ತೆ ರೋಹಿತ್ಗೆ ವಹಿಸಿದೆ.
2011ರಲ್ಲಿ ಮುಂಬೈ ತಂಡ ಸೇರಿದ ರೋಹಿತ್, ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಐದು ಐಪಿಎಲ್ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಅವರ ಅನುಭವ, ನಾಯಕತ್ವದ ಗುಣ ಹಾಗೂ ಯುವ ಆಟಗಾರರನ್ನು ಬೆಳೆಸುವ ಸಾಮರ್ಥ್ಯ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ರೋಹಿತ್ ನಾಯಕನಾಗಿ ಮರಳಿರುವುದು ತಂಡ ಮತ್ತು ಅಭಿಮಾನಿಗಳಿಗೆ ವಿಶೇಷ ಕ್ಷಣ ಎಂದು ಫ್ರಾಂಚೈಸಿಯ ಮಾಲಕಿ ನೀತಾ ಎಂ. ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ. ತಂಡದ ಅನುಭವ ಮತ್ತು ಹೊಸ ಆಟಗಾರರ ಸಂಯೋಜನೆಯೊಂದಿಗೆ ಮುಂಬರುವ ಸೀಸನ್ ಸ್ಮರಣೀಯವಾಗಲಿದೆ ಎಂಬ ವಿಶ್ವಾಸವನ್ನು ಆಕಾಶ್ ಅಂಬಾನಿ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವುದು ಹೆಮ್ಮೆಯ ವಿಷಯ. ಅಭಿಮಾನಿಗಳಾದ ‘ಪಲ್ಟಾನ್’ಗೆ ಮತ್ತಷ್ಟು ಸ್ಮರಣೀಯ ಕ್ಷಣಗಳನ್ನು ನೀಡಲು ಉತ್ಸುಕನಾಗಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.


Comments (0)