ಪಾಕಿಸ್ತಾನ ಸೇನಾ ವಾಹನಗಳ ಮೇಲೆ ಬಾಂಬ್ ದಾಳಿ: ನಾಲ್ವರು ಸೈನಿಕರು ಸಾವು!
- by Legal Samachar
- November 28, 2026
- 1 Views
ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದ ಕೆಚ್ ಜಿಲ್ಲೆಯಲ್ಲಿ ಸೇನಾ ಬೆಂಗಾವಲು ವಾಹನಗಳನ್ನು ಗುರಿಯಾಗಿಸಿ ಶುಕ್ರವಾರ ನಡೆದ ಬಾಂಬ್ ಹಾಗೂ ಶಸ್ತ್ರಸಜ್ಜಿತ ದಾಳಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಬಿಲ್ ನಾಗೋರ್ ಪ್ರದೇಶದ ದಾರಾಚ್ಕೊ ಮತ್ತು ಜಾಥ್ ನಡುವಿನ ಮಾರ್ಗದಲ್ಲಿ ದಾಳಿ ನಡೆದಿದೆ. ಮೃತಪಟ್ಟವರನ್ನು ಲಾನ್ಸ್ ನಾಯಕ್ ಅಬಿದ್, ವಸೀಮ್, ಸಿಪಾಯಿ ದಾನಿಶ್ ಮತ್ತು ಫರೀದ್ ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಹವಾಲ್ದಾರ್ ಖಾದಿರ್, ಲಾನ್ಸ್ ನಾಯಕ್ ಜಫರ್ ಸೇರಿದ್ದಾರೆ.

ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಇದೇ ವೇಳೆ, ಬಲೂಚ್ ಲಿಬರೇಷನ್ ಆರ್ಮಿ (BLA) ನವೆಂಬರ್ 21 ಮತ್ತು 22ರಂದು ಬಲೂಚಿಸ್ತಾನದ ವಿವಿಧೆಡೆ ನಡೆಸಿದ ದಾಳಿಗಳಲ್ಲಿ ಹಲವು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿತ್ತು. ನವೆಂಬರ್ 24ರಂದು 20 ಸೇನಾ ಸಿಬ್ಬಂದಿ ಹಾಗೂ ಇತರ ಕಾರ್ಯಾಚರಣೆಗಾರರನ್ನು ಹತ್ಯೆ ಮಾಡಿರುವುದಾಗಿಯೂ ಸಂಘಟನೆ ಪ್ರತಿಪಾದಿಸಿತ್ತು.


Comments (0)