ಕುವೈತ್ ಡ್ರೋನ್ ದಾಳಿಯಲ್ಲಿ ಇರಾನ್ ಕೈವಾಡವಿಲ್ಲ: ಅರಾಘ್ಚಿ ಸ್ಪಷ್ಟನೆ!

ಕುವೈತ್‌ನಲ್ಲಿ ನಡೆದ ಡ್ರೋನ್ ದಾಳಿಗೂ ಇರಾನ್‌ಗೂ ಸಂಬಂಧವಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ. ಕುವೈತ್ ಮತ್ತು ಇಟಲಿ ವಿದೇಶಾಂಗ ಸಚಿವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಅವರು, ದಾಳಿಯ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಕುವೈತ್ ಮತ್ತು ಇಟಲಿ ಜೊತೆ ಜಂಟಿ ತನಿಖೆ ನಡೆಸಲು ಇರಾನ್ ಸಿದ್ಧವಿದೆ. ಡ್ರೋನ್ ಅನ್ನು ಇರಾನ್ ಸೇನೆ ಉಡಾವಣೆ ಮಾಡಿಲ್ಲ ಎಂದು ಅರಾಘ್ಚಿ ಹೇಳಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಇಬ್ಬರು ಇಟಲಿ ಪ್ರಜೆಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ಆದರೆ, ಇರಾನ್‌ನಿಂದಲೇ ಡ್ರೋನ್ ಬಂದಿದೆ ಎಂದು ಕುವೈತ್ ಸೇನೆ ಆರೋಪಿಸಿದೆ. ದಾಳಿಗೊಳಗಾದ ಕಟ್ಟಡದ ಅವಶೇಷಗಳು ಬಿದ್ದು ಇಬ್ಬರು ಇಟಲಿ ಪ್ರಜೆಗಳು ಮೃತಪಟ್ಟಿದ್ದು, ಓರ್ವ ಕುವೈತ್ ಮತ್ತು ಓರ್ವ ಪಾಕಿಸ್ತಾನಿ ಪ್ರಜೆ ಗಾಯಗೊಂಡಿದ್ದಾರೆ. ಆಸ್ತಿಪಾಸ್ತಿಗೂ ಹಾನಿಯಾಗಿದೆ.

Related Articles

Comments (0)