ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರಿಗೂ ಅವಕಾಶ ನೀಡಿ: ನಟಿ ರಮ್ಯಾ ಆಗ್ರಹ
- by Legal Samachar
- November 18, 2026
- 6 Views
ಬೆಂಗಳೂರು: 2009ರಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಈವರೆಗೆ ಒಬ್ಬ ಮಹಿಳೆ ಮಾತ್ರ ಅಧ್ಯಕ್ಷರಾಗಿದ್ದಾರೆ. ತಾರಾ ಅನುರಾಧ ಅವರು 13 ವರ್ಷಗಳ ಹಿಂದೆ ಕೇವಲ 15 ತಿಂಗಳ ಕಾಲ ಈ ಹುದ್ದೆಯನ್ನು ನಿರ್ವಹಿಸಿದ್ದರು ಎಂದು ನಟಿ ರಮ್ಯಾ ಹೇಳಿದ್ದಾರೆ.
ಕನ್ನಡ ಚಿತ್ರರಂಗವನ್ನು ಮಹಿಳೆಯರು ರೂಪಿಸುತ್ತಾರೆ, ಸಿನಿಮಾಗಳನ್ನು ವೀಕ್ಷಿಸುತ್ತಾರೆ ಹಾಗೂ ಅವುಗಳಿಂದ ಪ್ರಭಾವಿತರಾಗುತ್ತಾರೆ. ಹೀಗಿರುವಾಗ ಚಿತ್ರರಂಗದ ನಾಯಕತ್ವವನ್ನೂ ಮಹಿಳೆಯರು ವಹಿಸಿಕೊಳ್ಳುವ ಸಮಯ ಬಂದಿದೆ. ಮುಂದಿನ ಅಕಾಡೆಮಿ ಅಧ್ಯಕ್ಷರು ಮಹಿಳೆಯಾಗಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಹುದ್ದೆಗೆ ಕವಿತಾ ಲಂಕೇಶ್ ಅವರ ಹೆಸರನ್ನು ಪ್ರಸ್ತಾಪಿಸಿರುವ ರಮ್ಯಾ, ‘ದೇವೇರಿ’ ಚಿತ್ರದ ಮೂಲಕ ಪ್ರಶಸ್ತಿ ಪಡೆದಿರುವ ಅವರು, ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. 50ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದು, ಐಎಫ್ಎಫ್ಐ ಮತ್ತು ಆಸ್ಕರ್ ಆಯ್ಕೆ ಸಮಿತಿಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಅರ್ಹತೆ ಮತ್ತು ಪ್ರಾತಿನಿಧ್ಯ ಎರಡಕ್ಕೂ ಮಹತ್ವ ನೀಡುವ ಸಮಯ ಬಂದಿದೆ ಎಂದು ರಮ್ಯಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Comments (0)