ಚಿತ್ರಮಂದಿರಗಳಿಗೆ ಕೈಗಾರಿಕಾ ವಲಯದ ಸ್ಥಾನಮಾನ ಕಲ್ಪಿಸಲು ಮನವಿ!
- by Legal Samachar
- November 28, 2026
- 2 Views
ಬೆಂಗಳೂರು: ರಾಜ್ಯದ ಚಿತ್ರಮಂದಿರಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವುದು, ಚಿತ್ರಮಂದಿರಗಳ ಅಭಿವೃದ್ಧಿ ಮತ್ತು ಆಧುನೀಕರಣ ಹಾಗೂ ಕೈಗಾರಿಕಾ ವಲಯದ ಸ್ಥಾನಮಾನ ಕಲ್ಪಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ಸಭಾಪತಿ ಅವರನ್ನು ಭೇಟಿ ಮಾಡಿದ ಮಂಡಳಿ ಪ್ರತಿನಿಧಿಗಳು, ಚಿತ್ರಮಂದಿರಗಳ ಉಳಿವು ಮತ್ತು ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ್, ಮಾಜಿ ಅಧ್ಯಕ್ಷರಾದ ಬಾ.ಮಾ. ಹರೀಶ್, ಸಾರಾ ಗೋವಿಂದು, ಕೆ.ವಿ. ಚಂದ್ರಶೇಖರ್, ಥಾಮಸ್ ಡಿಸೋಜ, ಎನ್.ಎಂ. ಸುರೇಶ್, ನರಸಿಂಹಲು ಸೇರಿದಂತೆ ಪದಾಧಿಕಾರಿಗಳಾದ ಸುಂದರ್ ರಾಜ್, ಜಯಸಿಂಹ ಮುಸುರಿ, ಕೆ. ಮಂಜು ಮತ್ತಿತರರು ಉಪಸ್ಥಿತರಿದ್ದರು.


Comments (0)