ಚೀನಾವನ್ನು ಮಣಿಸಿ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ವನಿತೆಯರು

ಭೋಪಾಲ್: ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2026ರ ಫೈನಲ್‌ನಲ್ಲಿ ಚೀನಾವನ್ನು 3-1 ಗೋಲುಗಳಿಂದ ಸೋಲಿಸಿದ ಭಾರತ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಮೊದಲಾರ್ಧದ 25ನೇ ನಿಮಿಷದಲ್ಲಿ ಯುಜುನ್ ಚೆನ್ ಗೋಲು ಬಾರಿಸಿ ಚೀನಾಗೆ ಮುನ್ನಡೆ ನೀಡಿದರು. ಆದರೆ ದ್ವಿತೀಯಾರ್ಧದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಭಾರತ ಪರ 38ನೇ ನಿಮಿಷದಲ್ಲಿ ದೀಪಿಕಾ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. 42ನೇ ನಿಮಿಷದಲ್ಲಿ ಇಶಿಕಾ ಫೀಲ್ಡ್ ಗೋಲು ದಾಖಲಿಸಿದರು. 43ನೇ ನಿಮಿಷದಲ್ಲಿ ದೀಪಿಕಾ ಮತ್ತೊಂದು ಗೋಲು ಬಾರಿಸಿ ಭಾರತದ ಗೆಲುವು ಖಚಿತಪಡಿಸಿದರು.

ಟೂರ್ನಿಯಲ್ಲಿ 10 ಗೋಲು ಗಳಿಸಿದ ದೀಪಿಕಾ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನವೆಂಬರ್ 19ರಿಂದ 28ರವರೆಗೆ ನಡೆದ ಟೂರ್ನಿಯಲ್ಲಿ ಭಾರತ ಅಜೇಯವಾಗಿ ಉಳಿಯಿತು. ಮುಖ್ಯಮಂತ್ರಿ ಮೋಹನ್ ಯಾದವ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Comments (0)