ವಿಯೆಟ್ನಾಂನಲ್ಲಿ ಭೀಕರ ಪ್ರವಾಹ; 1,700 ಮನೆಗಳು ಜಲಾವೃತ!
- by Legal Samachar
- November 28, 2026
- 14 Views
ಹನೋಯಿ: ವಿಯೆಟ್ನಾಂನ ಮಧ್ಯ ಭಾಗದ ಕ್ವಾಂಗ್ ನ್ಗೈ ಪ್ರಾಂತ್ಯದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದ್ದು, ಶನಿವಾರದ ವೇಳೆಗೆ ಸುಮಾರು 1,700 ಮನೆಗಳು ಜಲಾವೃತಗೊಂಡಿವೆ. ಪ್ರಾಂತ್ಯದ 21 ಕಮ್ಯೂನ್‌ಗಳು ಮತ್ತು ವಾರ್ಡ್‌ಗಳು ಪ್ರವಾಹಕ್ಕೆ ತುತ್ತಾಗಿವೆ.
ಥಿಯೆನ್ ಟಿನ್‌ನಲ್ಲಿ 1,115 ಹಾಗೂ ಫುಯೋಕ್ ಜಿಯಾಂಗ್‌ನಲ್ಲಿ 490 ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹ ಮತ್ತು ಭೂಕುಸಿತದ ಭೀತಿಯಿಂದ 83 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಗಿಯಾ ಲೈ, ಡಾಕ್ ಲಾಕ್ ಮತ್ತು ಖಾನ್ ಹೋವಾ ಪ್ರಾಂತ್ಯಗಳಲ್ಲೂ ಪ್ರವಾಹದಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

ನವೆಂಬರ್ 30ರ ಬೆಳಗ್ಗೆಯವರೆಗೆ ಕೆಲವೆಡೆ 500 ಮಿ.ಮೀ.ಗೂ ಅಧಿಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇದರಿಂದ ಮತ್ತಷ್ಟು ಪ್ರವಾಹ ಮತ್ತು ಭೂಕುಸಿತದ ಆತಂಕ ಎದುರಾಗಿದೆ.


Comments (0)