ಅಫ್ಘಾನಿಸ್ತಾನದಲ್ಲಿ ಭೀಕರ ಸ್ಫೋಟ; 10 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ!
- by Legal Samachar
- November 28, 2026
- 10 Views
ಕಾಬೂಲ್: ಅಫ್ಘಾನಿಸ್ತಾನದ ಪೂರ್ವ ಕುನಾರ್ ಪ್ರಾಂತ್ಯದ ಅಸದಾಬಾದ್ನ ಅಂದಿರ್ ಸಿರ್ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದು, 110 ಜನರು ಗಾಯಗೊಂಡಿದ್ದಾರೆ.
ಶಾಲೆಯ ಸಮೀಪ ಗಣಿಗಾರಿಕೆ ಕಂಪನಿಗಳಿಗೆ ಸೇರಿದ ಸ್ಫೋಟಕ ಸಂಗ್ರಹ ಸ್ಥಳದಲ್ಲಿ ಘಟನೆ ನಡೆದಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ನಿರ್ಲಕ್ಷ್ಯ ಅಥವಾ ಮುನ್ನೆಚ್ಚರಿಕೆ ಕ್ರಮಗಳ ಕೊರತೆಯಿಂದ ಸ್ಫೋಟ ಸಂಭವಿಸಿರುವ ಶಂಕೆಯಿದ್ದು, ತನಿಖೆ ಆರಂಭಿಸಲಾಗಿದೆ.

ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳನ್ನು ಜಲಾಲಾಬಾದ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಳಿದವರಿಗೆ ಕುನಾರ್ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಅಫ್ಘಾನಿಸ್ತಾನದಲ್ಲಿ ನೆಲಬಾಂಬ್ ಮತ್ತು ಸ್ಫೋಟಗೊಳ್ಳದ ಶಸ್ತ್ರಾಸ್ತ್ರಗಳ ಅಪಾಯವೂ ಮುಂದುವರಿದಿದೆ. 2026ರಲ್ಲಿ ಇವುಗಳಿಂದ 257 ಮಂದಿ ಮೃತಪಟ್ಟಿದ್ದು, 87 ಜನರು ಗಾಯಗೊಂಡಿದ್ದಾರೆ. ಸಂತ್ರಸ್ತರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ.


Comments (0)