ಯೆಮನ್ ರಾಜಧಾನಿ ಸನಾದಲ್ಲಿ ವಾಯುದಾಳಿ; 72 ದಾಳಿ ನಡೆಸಿದ ಸೌದಿ ಪಡೆಗಳು: ಹೌತಿಗಳ ಆರೋಪ

ಸನಾ: ಯೆಮನ್ ರಾಜಧಾನಿ ಸನಾದಲ್ಲಿ ಮಂಗಳವಾರ ತಡರಾತ್ರಿ ವಾಯುದಾಳಿ ನಡೆದಿದೆ. ಸನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಹೌತಿ ನಿಯಂತ್ರಿತ ಅಲ್-ಮಸಿರಾ ಟಿವಿ ವರದಿ ಮಾಡಿದೆ. ಹಾನಿ ಮತ್ತು ಸಾವು-ನೋವಿನ ವಿವರ ಲಭ್ಯವಾಗಿಲ್ಲ.

ಕಳೆದ 24 ಗಂಟೆಗಳಲ್ಲಿ ಸೌದಿ ಪಡೆಗಳು ಯೆಮನ್‌ನಾದ್ಯಂತ 72 ವಾಯು ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ್ದು, ನಾಗರಿಕರು ಮೃತಪಟ್ಟಿದ್ದಾರೆ ಎಂದು ಹೌತಿ ವಕ್ತಾರ ಯಾಹ್ಯಾ ಸರಿಯಾ ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ರಿಯಾದ್‌ನ ಹಣಕಾಸು ಕೇಂದ್ರದ ಕಟ್ಟಡದ ಮೇಲೆ ಡ್ರೋನ್ ದಾಳಿ ನಡೆದಿರುವುದಾಗಿ ಸೌದಿ ನೇತೃತ್ವದ ಒಕ್ಕೂಟ ಆರೋಪಿಸಿತ್ತು. ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗೆ ಪ್ರತಿಕ್ರಿಯಿಸುವುದಾಗಿ ಎಚ್ಚರಿಸಿತ್ತು.

ಸೌದಿ ಅರೇಬಿಯಾದ ಮೇಲಿನ ದಾಳಿಯನ್ನು ಯುಎಇ, ಬಹರೇನ್, ಕತಾರ್ ಮತ್ತು ಅರಬ್ ಲೀಗ್ ಖಂಡಿಸಿವೆ. ಹೌತಿ ಸಂಘಟನೆ ಹಾಗೂ ನಾಲ್ವರು ನಾಯಕರ ವಿರುದ್ಧ ಬ್ರಿಟನ್ ನಿರ್ಬಂಧ ವಿಧಿಸಿದ್ದು, ಇದನ್ನು ಹೌತಿಗಳು ತಿರಸ್ಕರಿಸಿದ್ದಾರೆ.

Related Articles

Comments (0)