2070ರ ವೇಳೆಗೆ ಭಾರತದ ಹಿಂದೂ ಜನಸಂಖ್ಯೆ 17.6 ಕೋಟಿ ಹೆಚ್ಚಳ ಸಾಧ್ಯ: ಪ್ಯೂ ವರದಿ

2020ರಿಂದ 2070ರ ಅವಧಿಯಲ್ಲಿ ಭಾರತದ ಹಿಂದೂ ಜನಸಂಖ್ಯೆ ಸುಮಾರು 17.6 ಕೋಟಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪ್ಯೂ ಸಂಶೋಧನಾ ವರದಿ ಅಂದಾಜಿಸಿದೆ. ಧರ್ಮಗಳ ಜನಸಂಖ್ಯಾ ಬೆಳವಣಿಗೆಯಲ್ಲಿ ಧರ್ಮಾಂತರಕ್ಕಿಂತ ಜನನ ಪ್ರಮಾಣವೇ ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿ ತಿಳಿಸಿದೆ.

2020–2025ರ ಅವಧಿಯಲ್ಲಿ ಮುಸ್ಲಿಂ ಮಹಿಳೆಯರ ಸರಾಸರಿ ಫಲವತ್ತತೆ ಪ್ರಮಾಣ ಪ್ರತಿ ಮಹಿಳೆಗೆ 3.1 ಮಕ್ಕಳಾಗಿದ್ದರೆ, ಕ್ರೈಸ್ತ ಮಹಿಳೆಯರಲ್ಲಿ 2.5 ಮತ್ತು ಇತರ ಧಾರ್ಮಿಕ ಗುಂಪುಗಳಲ್ಲಿ 1.6 ಮಕ್ಕಳಷ್ಟಿದೆ. ಜನಸಂಖ್ಯೆಯನ್ನು ಸ್ಥಿರವಾಗಿಡಲು ಪ್ರತಿ ಮಹಿಳೆಗೆ 2.1 ಮಕ್ಕಳ ಜನನ ಪ್ರಮಾಣ ಅಗತ್ಯವೆಂದು ಪರಿಗಣಿಸಲಾಗಿದೆ.

Photo: Manju Neereshwalya, Mangaluru

2070ರ ವೇಳೆಗೆ ಪಾಕಿಸ್ತಾನವು ಇಂಡೋನೇಷ್ಯಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಭಾರತ ಎರಡನೇ ಸ್ಥಾನಕ್ಕೇರಲಿದೆ ಎಂದು ವರದಿ ಅಂದಾಜಿಸಿದೆ.

ಇದೇ ಅವಧಿಯಲ್ಲಿ ವಿಶ್ವದ ಅರ್ಧಕ್ಕಿಂತ ಹೆಚ್ಚು ಕ್ರೈಸ್ತರು ಉಪ-ಸಹಾರನ್ ಆಫ್ರಿಕಾದಲ್ಲಿ ವಾಸಿಸುವ ಸಾಧ್ಯತೆಯಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಕ್ರೈಸ್ತರ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಅಮೆರಿಕವನ್ನು ಹಿಂದಿಕ್ಕಬಹುದು.

ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಜನಸಂಖ್ಯೆ ಕುಸಿತದಿಂದ ಜಾಗತಿಕ ಬೌದ್ಧರ ಸಂಖ್ಯೆ 2020ರಲ್ಲಿದ್ದ 32 ಕೋಟಿಯಿಂದ 2070ರ ವೇಳೆಗೆ 25 ಕೋಟಿಗೆ ಇಳಿಯುವ ನಿರೀಕ್ಷೆಯಿದೆ. ಮತ್ತೊಂದೆಡೆ, ನಾಸ್ತಿಕರು ಮತ್ತು ಅಜ್ಞೇಯತಾವಾದಿಗಳು ಸೇರಿದಂತೆ ಯಾವುದೇ ಧರ್ಮದೊಂದಿಗೆ ಗುರುತಿಸಿಕೊಳ್ಳದವರ ಸಂಖ್ಯೆ ಜಾಗತಿಕವಾಗಿ 18 ಕೋಟಿಗೂ ಹೆಚ್ಚು ಹೆಚ್ಚಾಗಬಹುದು ಎಂದು ವರದಿ ತಿಳಿಸಿದೆ.

Related Articles

Comments (0)