ಸರ್ಜಿತ್ ಹಾಕಿ ಟೂರ್ನಿ: ಮೊದಲ ದಿನ ಭಾರತ್ ಪೆಟ್ರೋಲಿಯಂ, ವಾಯುಪಡೆಗೆ ಜಯ
- by Legal Samachar
- November 23, 2026
- 11 Views
ಜಲಂಧರ್: 43ನೇ ಇಂಡಿಯನ್ ಆಯಿಲ್ ಸರ್ವೋ ಸರ್ಜಿತ್ ಹಾಕಿ ಟೂರ್ನಿ ಜಲಂಧರ್ನಲ್ಲಿ ಆರಂಭಗೊಂಡಿದ್ದು, ಮೊದಲ ದಿನ ಮೂರು ಪಂದ್ಯಗಳು ನಡೆದವು.
ಪೂಲ್-ಎ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಇಂಡಿಯನ್ ಆಯಿಲ್ ಮುಂಬೈ ಮತ್ತು ಬಿಎಸ್ಎಫ್ ಜಲಂಧರ್ ತಂಡಗಳು 1-1 ಗೋಲುಗಳಿಂದ ಡ್ರಾ ಸಾಧಿಸಿದವು.

ಪೂಲ್-ಬಿ ಪಂದ್ಯದಲ್ಲಿ ಭಾರತ್ ಪೆಟ್ರೋಲಿಯಂ ತಂಡವು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ದೆಹಲಿ ತಂಡವನ್ನು 2-1 ಗೋಲುಗಳಿಂದ ಮಣಿಸಿತು.
ಪೂಲ್-ಡಿ ಪಂದ್ಯದಲ್ಲಿ ಭಾರತೀಯ ವಾಯುಪಡೆ ತಂಡವು ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ದೆಹಲಿ ತಂಡದ ವಿರುದ್ಧ 2-1 ಗೋಲುಗಳಿಂದ ಗೆಲುವು ದಾಖಲಿಸಿತು.


Comments (0)