ಜಪಾನ್ ವಿರುದ್ಧ 4-0 ಗೆಲುವು: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ಗೆ ಭಾರತ

ಭೋಪಾಲ್: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತ, ಜಪಾನ್ ತಂಡವನ್ನು 4-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.

ದೀಪಿಕಾ ಎರಡು ಗೋಲು ಗಳಿಸಿದರೆ, ಲಾಲ್ರೆಮ್ಸಿಯಾಮಿ ಮತ್ತು ನೇಹಾ ತಲಾ ಒಂದು ಗೋಲು ದಾಖಲಿಸಿದರು. ನವನೀತ್ ಕೌರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇತರ ಪಂದ್ಯಗಳಲ್ಲಿ ಮಲೇಷ್ಯಾ 4-0 ಅಂತರದಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿದರೆ, ಚೀನಾ 1-0ರಿಂದ ಕೊರಿಯಾವನ್ನು ಮಣಿಸಿತು.

ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ಮಲೇಷ್ಯಾವನ್ನು ಎದುರಿಸಲಿದೆ. ನವೆಂಬರ್ 28ರಂದು ಟೂರ್ನಿ ಮುಕ್ತಾಯಗೊಳ್ಳಲಿದ್ದು, ಕಂಚಿನ ಪದಕದ ಪಂದ್ಯ ಸಂಜೆ 4.30ಕ್ಕೆ ಮತ್ತು ಫೈನಲ್ ಸಂಜೆ 7 ಗಂಟೆಗೆ ನಡೆಯಲಿದೆ.

Related Articles

Comments (0)