ಕಾರ್ತಿಕ ಪೂರ್ಣಿಮೆ ಸಂಭ್ರಮ; ವಾರಾಣಸಿ, ಪ್ರಯಾಗ್ರಾಜ್ನಲ್ಲಿ ಪವಿತ್ರ ಸ್ನಾನಕ್ಕೆ ಭಕ್ತಸಾಗರ
- by Legal Samachar
- November 24, 2026
- 11 Views
ವಾರಾಣಸಿ: ಕಾರ್ತಿಕ ಪೂರ್ಣಿಮೆ ಅಂಗವಾಗಿ ಉತ್ತರ ಪ್ರದೇಶದ ವಾರಾಣಸಿ ಮತ್ತು ಪ್ರಯಾಗ್ರಾಜ್ನಲ್ಲಿ ಮಂಗಳವಾರ ಸಾವಿರಾರು ಭಕ್ತರು ಗಂಗಾ ಮತ್ತು ಯಮುನಾ ನದಿಗಳಲ್ಲಿ ಪವಿತ್ರ ಸ್ನಾನ ಮಾಡಿದರು. ಬೆಳಗ್ಗಿನಿಂದಲೇ ವಿವಿಧ ಘಾಟ್ಗಳಲ್ಲಿ ಭಕ್ತರ ದಂಡು ಹರಿದುಬಂದಿತ್ತು.
ಕಾರ್ತಿಕ ಪೂರ್ಣಿಮೆ, ದೇವ್ ದೀಪಾವಳಿ ಮತ್ತು ಗುರುನಾನಕ್ ಜಯಂತಿ ಒಂದೇ ದಿನ ಬಂದಿರುವುದು ವಿಶೇಷವಾಗಿತ್ತು. ಕಾಶಿಯ ಘಾಟ್ಗಳಲ್ಲಿ ಭಕ್ತರು ಸ್ನಾನ ಮಾಡಿ, ಪೂಜೆ ಸಲ್ಲಿಸಿ ದೀಪಗಳನ್ನು ಬೆಳಗಿಸಿದರು. ಕಾರ್ತಿಕ ಮಾಸದ ತಿಂಗಳ ಕಾಲದ ಪವಿತ್ರ ಸ್ನಾನದ ಆಚರಣೆಗೂ ಈ ದಿನ ತೆರೆ ಬಿದ್ದಿತು.

ಕಾರ್ತಿಕ ಪೂರ್ಣಿಮೆಯಂದು ಸ್ನಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಹಾಗೂ ದೇವತೆಗಳ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಪ್ರಯಾಗ್ರಾಜ್ನ ಯಮುನಾ ಘಾಟ್ಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು. ತುಳಸಿ ಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆದವು. ಕಾರ್ತಿಕ ಮಾಸದಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಪೂರ್ಣಿಮೆಯಂದು ಸ್ನಾನ ಮಾಡಿದರೂ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ಭಕ್ತರು ಪಾಲ್ಗೊಂಡರು.


Comments (0)