ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 7-0 ಭರ್ಜರಿ ಜಯ

ಭೋಪಾಲ್: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಸತತ ಮೂರನೇ ಗೆಲುವು ದಾಖಲಿಸಿದೆ. ಲೀಗ್ ಹಂತದ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 7-0 ಗೋಲುಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಭಾರತದ ಪರ ದೀಪಿಕಾ ಅಮೋಘ ಪ್ರದರ್ಶನ ನೀಡಿ ಹ್ಯಾಟ್ರಿಕ್ ಗೋಲು ದಾಖಲಿಸಿದರು. ನವ್‌ನೀತ್ ಕೌರ್ ಎರಡು ಗೋಲು ಗಳಿಸಿದರೆ, ಮುಮ್ತಾಜ್ ಖಾನ್ ಮತ್ತು ನಾಯಕಿ ಸುನೆಲಿತಾ ಟೊಪ್ಪೊ ತಲಾ ಒಂದು ಗೋಲು ಬಾರಿಸಿದರು.

ಇದಕ್ಕೂ ಮುನ್ನ ಭಾರತ ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳನ್ನು ಸೋಲಿಸಿತ್ತು. ಸತತ ಮೂರು ಗೆಲುವುಗಳೊಂದಿಗೆ ಭಾರತ ಒಂಬತ್ತು ಅಂಕ ಗಳಿಸಿದೆ.

ಇತರ ಪಂದ್ಯಗಳಲ್ಲಿ ಮಲೇಷ್ಯಾ ತಂಡ ದಕ್ಷಿಣ ಕೊರಿಯಾವನ್ನು 3-1 ಗೋಲುಗಳಿಂದ ಸೋಲಿಸಿದರೆ, ಜಪಾನ್ ತಂಡ ಚೀನಾ ವಿರುದ್ಧ 3-1 ಗೋಲುಗಳ ಜಯ ಸಾಧಿಸಿತು.

Related Articles

Comments (0)