ಅಮೆರಿಕ ಕೃಷಿ ಇಲಾಖೆಯ ಮೇಲೆ ಸೈಬರ್ ದಾಳಿ: ರೈತರ ಪಾವತಿ ವ್ಯವಸ್ಥೆಗೆ ಹ್ಯಾಕರ್ಗಳ ಪ್ರವೇಶ
- by Legal Samachar
- November 21, 2026
- 12 Views
ವಾಷಿಂಗ್ಟನ್: ಅಮೆರಿಕದ ಕೃಷಿ ಇಲಾಖೆ (USDA) ಮೇಲೆ ಈ ವಾರ ಸೈಬರ್ ದಾಳಿ ನಡೆದಿದ್ದು, ರೈತರಿಗೆ ಪಾವತಿ ಮಾಡುವ ವ್ಯವಸ್ಥೆಯ ಕಂಪ್ಯೂಟರ್ಗಳನ್ನು ಹ್ಯಾಕರ್ಗಳು ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ. ಗುರುವಾರ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಸೂಕ್ಷ್ಮ ಮಾಹಿತಿ ಸೋರಿಕೆಯ ಆತಂಕ ವ್ಯಕ್ತವಾಗಿದೆ.
ಇತ್ತೀಚೆಗೆ ಮೈಕ್ರೋಸಾಫ್ಟ್ ಸೇವಾ ವ್ಯತ್ಯಯ, ವಿಮಾನ ಸಂಚಾರಕ್ಕೆ ಅಡ್ಡಿ, ಬ್ಯಾಂಕ್ಗಳ ಆನ್ಲೈನ್ ಸೇವೆಗಳ ಸಮಸ್ಯೆ ಹಾಗೂ ರಾಷ್ಟ್ರೀಯ ಭದ್ರತಾ ಸಂಸ್ಥೆಯ (NSA) ಆಂತರಿಕ ಸಂವಹನ ಜಾಲ ಸ್ಥಗಿತಗೊಂಡ ಘಟನೆಗಳು ನಡೆದಿವೆ. ಆದರೆ ಇವುಗಳಿಗೆ ಸೈಬರ್ ದಾಳಿಯೇ ಕಾರಣ ಎಂಬುದಕ್ಕೆ ಪುರಾವೆಗಳಿಲ್ಲ. ತಾಂತ್ರಿಕ ನಿರ್ವಹಣೆ ಮತ್ತು ಬದಲಾವಣೆಗಳಿಂದ ವ್ಯತ್ಯಯ ಉಂಟಾಗಿದೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ಸೈಬರ್ ನಿರ್ದೇಶಕ ಸೀನ್ ಕೇರ್ನ್ಕ್ರಾಸ್ ಅವರನ್ನು ವಜಾಗೊಳಿಸಿದ್ದಾರೆ. ಅವರ ಸ್ಥಾನಕ್ಕೆ ರಕ್ಷಣಾ ಇಲಾಖೆಯ ಮುಖ್ಯ ಮಾಹಿತಿ ಅಧಿಕಾರಿ ಕರ್ಸ್ಟನ್ ಡೇವಿಸ್ ಅವರನ್ನು ನೇಮಿಸಿದ್ದಾರೆ. ನೇಮಕಾತಿಗೆ ಸೆನೆಟ್ ಅನುಮೋದನೆ ಅಗತ್ಯವಿದೆ.


Comments (0)