- ಟ್ರಯಲ್ ಕೋರ್ಟ್
- Like this post: 16
ಬಸವರಾಜ ಬೊಮ್ಮಾಯಿ ಮಾನಹಾನಿ ಸುದ್ದಿ ಪ್ರಕಟಣೆಗೆ ನಿರ್ಬಂಧ; ಬೆಂಗಳೂರು ಸೆಷನ್ಸ್ ಕೋರ್ಟ್ ಆದೇಶ
- by Jagan Ramesh
- August 28, 2024
- 314 Views
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಯಾವುದೇ ರೀತಿಯ ಮಾನಹಾನಿ ಹೇಳಿಕೆ, ವರದಿಗಳನ್ನು ಪ್ರಸಾರ ಅಥವಾ ಪ್ರಕಟ ಮಾಡದಂತೆ ವಕೀಲ ಕೆ.ಎನ್. ಜಗದೀಶ್, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸಿದೆ.
ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಸಲ್ಲಿಸಿರುವ ಮೂಲ ದಾವೆಯ ಭಾಗವಾಗಿ ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶೆ ವಾಣಿ ಎ. ಶೆಟ್ಟಿ ಅವರು ಬುಧವಾರ ಈ ಆದೇಶ ಮಾಡಿದ್ದಾರೆ.
ಆದೇಶದಲ್ಲೇನಿದೆ?
ಪ್ರಕರಣದ ಪ್ರತಿವಾದಿಗಳು ಮತ್ತು ಅವರಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳು ದಾವೆಯ ಮುಂದಿನ ವಿಚಾರಣೆಯವರೆಗೆ ದೂರುದಾರ ಬಸವರಾಜ ಬೊಮ್ಮಾಯಿ ಅವರ ಮಾನಹಾನಿಯುಂಟು ಮಾಡುವ ಯಾವುದೇ ಸುದ್ದಿ ಪ್ರಸಾರ, ಪ್ರಕಟ ಮತ್ತು ಹಂಚಿಕೆ ಮಾಡಬಾರದು ಎಂದು ಏಕಪಕ್ಷಕೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿರುವ ನ್ಯಾಯಾಲಯ, ಬೊಮ್ಮಾಯಿ ಅವರ ಮಾನಹಾನಿಯಾಗುವಂತಹ ಅಂಶಗಳನ್ನೊಳಗೊಂಡಿರುವ ಎರಡು ಪೋಸ್ಟ್‌ಗಳನ್ನು 24 ಗಂಟೆಗಳ ಒಳಗೆ ಅಳಿಸಿಹಾಕಬೇಕು ಎಂದು ಪ್ರಕರಣದ 48ನೇ ಪ್ರತಿವಾದಿ ‘ಎಕ್ಸ್ ಕಾರ್ಪ್’ (ಟ್ವಿಟರ್) ಗೆ ನಿರ್ದೇಶಿಸಿದೆ. ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಮತ್ತು ಸಮನ್ಸ್ ಜಾರಿ ಮಾಡಿರುವ ನ್ಯಾಯಾಲಯ ವಿಚಾರಣೆಯನ್ನು ಸೆಪ್ಟಂಬರ್ 9ಕ್ಕೆ ಮುಂದೂಡಿದೆ.
Related Articles
Thank you for your comment. It is awaiting moderation.
Comments (0)