- ಟ್ರಯಲ್ ಕೋರ್ಟ್
- ಹೈಕೋರ್ಟ್
- Like this post: 5
ತಾಪಮಾನ ಹೆಚ್ಚಳ; ಕಲಬುರಗಿ ಕೋರ್ಟ್ ಕಾರ್ಯಕಲಾಪದ ಸಮಯದಲ್ಲಿ ಬದಲಾವಣೆ
- by Legal Samachar Desk
- April 3, 2026
- 8 Views
ಬೆಂಗಳೂರು: ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿರುವ ಹಿನ್ನೆಲೆಯಲ್ಲಿ ಏಪ್ರಿಲ್ 6ರಿಂದ ಮೇ ಅಂತ್ಯದವರಗೆ ಅನ್ವಯವಾಗುವಂತೆ ಹೈಕೋರ್ಟ್ ಕಲಬುರಗಿ ಪೀಠಗಳ ಕಾರ್ಯಕಲಾಪದ ಸಮಯ ಬದಲಾವಣೆ ಮಾಡಲಾಗಿದೆ.
ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.
ಕಲಬುರಗಿ ಹೈಕೋರ್ಟ್ ಪೀಠದ ಕಲಾಪವು ಏಪ್ರಿಲ್ 6ರಿಂದ ಮೇ ಅಂತ್ಯದವರೆಗೆ ಪ್ರತಿದಿನ ಬೆಳಗ್ಗೆ 8ರಿಂದ 11 ಗಂಟೆ ಹಾಗೂ 11.3ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, 11ರಿಂದ 11.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಶನಿವಾರ ಹೊರತುಪಡಿಸಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 2ಗಂಟೆಯವರಿಗೆ ಇರಲಿದೆ. ಶನಿವಾರ ಬೆಳಗ್ಗೆ 7.30ರಿಂದ 11 ಗಂಟೆಯವರೆಗೆ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಿಚಾರಣಾ ಕೋರ್ಟ್‌ಗಳ ಸಮಯದಲ್ಲೂ ಬದಲಾವಣೆ:
ಕಲಬುರಗಿ ವಿಭಾಗದಡಿ ಬರುವ ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯನಗರ, ಯಾದಗಿರಿ ಮತ್ತು ಬೆಳಗಾವಿ ವಿಭಾಗದಕ್ಕೆ ಬರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಿವಿಲ್ ಮತ್ತು ಕ್ರಿಮಿನಲ್, ಕೌಟುಂಬಿಕ ಮತ್ತು ಕಾರ್ಮಿಕ ನ್ಯಾಯಾಲಯ ಕಾರ್ಯ ಕಲಾಪದ ಸಮಯವನ್ನೂ ಸಹ ಏಪ್ರಿಲ್ 4ರಿಂದ ಮೇ ಅಂತ್ಯದವರೆಗೆ ಬದಲಿಸಲಾಗಿದೆ.
ಈ ನ್ಯಾಯಾಲಯಗಳಲ್ಲಿ ಬೆಳಗ್ಗೆ 8ರಿಂದ 11 ಮತ್ತು 11.30ರಿಂದ ಮಧ್ಯಾಹ್ನ 1.30ರವರೆಗೆ ಕಲಾಪ ನಡೆಯಲಿದೆ. ಮಧ್ಯಾಹ್ನ 11ರಿಂದ 11.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಬೆಳಗ್ಗೆ 7.30ಕ್ಕೆ ಆರಂಭವಾಗಿ ಮಧ್ಯಾಹ್ನ 2ಕ್ಕೆ ಕೊನೆಯಾಗಲಿದೆ. ಏಪ್ರಿಲ್ 24ರಂದು ನಾಲ್ಕನೇ ಶನಿವಾರ ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನ್ಯಾಯಾಲಯ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Related Articles
Thank you for your comment. It is awaiting moderation.



Comments (0)