ಸಾರಿಗೆ ನೌಕರರ ಮುಷ್ಕರ ವಾಪಸ್; ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್

ಬೆಂಗಳೂರು: ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂಬ ಹೇಳಿಕೆ ಪರಿಗಣಿಸಿ, ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದರಿಂದ ಮುಷ್ಕರ ನಡೆಸದಂತೆ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಜೆ. ಸುನೀಲ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕಾರ್ಮಿಕ ಸಂಘಟನೆಗಳ ಪರ ವಕೀಲರು ಹಾಜರಾಗಿ, ಸದ್ಯ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿ, ಆ ಕುರಿತ ನಿರ್ಣಯವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಸರ್ಕಾರದ ಪರ ವಕೀಲರು, ಕಾರ್ಮಿಕರ ಜತೆ ಸಂಧಾನ ಮುಂದುವರಿಯುತ್ತಿದೆ. ಇಂದೂ ಸಹ ಮಾತುಕತೆ ನಡೆದಿದ್ದು, ಆಗಸ್ಟ್ 28ಕ್ಕೆ ಮತ್ತೆ ಸಂಧಾನ ಸಭೆ ನಡೆಯಲಿದೆ ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ಅವರು, ಸದ್ಯ ಮುಷ್ಕರ ಹಿಂಪಡೆಯಲಾಗಿದೆಯಾದರೂ, ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ. ಆದ್ದರಿಂದ, ಪ್ರಕರಣ ಸಂಬಂಧ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರ ಮತ್ತು ಕಾರ್ಮಿಕರ ನಡುವೆ ಸಂಧಾನ ಮುಂದುವರಿಯಲಿ. ಸದ್ಯ ಮುಷ್ಕರ ಹಿಂಪಡೆಯಲಾಗಿದೆ. ಆದ್ದರಿಂದ, ಪಿಐಎಲ್ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿ, ಅರ್ಜಿ ವಿಲೇವಾರಿ ಮಾಡಿತು.

Related Articles

Comments (4)

  • - Jagan Ramesh

    ಪ್ರತಿಭಟನೆ ಮಾಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುತ್ತದೆಯೇ? ಎಸ್ಮಾ ಜಾರಿಯಲ್ಲಿರುವ ಕಾರಣ, ಈಗಿರುವ ಸಮಸ್ಯೆಗಳ ಜತೆ ಕಾನೂನು ಸಂಕಷ್ಟಗಳೂ ಎದುರಾಗುತ್ತವೆ‌. ಕ್ರಿಮಿನಲ್ ಕೇಸ್ ಬೀಳುವ ಜತೆಗೆ, ಕೆಲಸವನ್ನೇ ಕಳೆದುಕೊಳ್ಳಬಹುದು. ದುಡುಕಿ ನಿರ್ಧಾರ ಕೈಗೊಳ್ಳಬೇಡಿ. ನಿಮ್ಮ ಸಂಘಟನೆಯವರೆಲ್ಲ ಸೇರಿ, ವಕೀಲರೊಂದಿಗೆ ಚರ್ಚಿಸಿ, ಎಸ್ಮಾ ಕಾಯ್ದೆಯಲ್ಲಿ ಹೇಳಲಾಗಿರುವ ವಿಚಾರಗಳು, ಅವುಗಳನ್ನು ಉಲ್ಲಂಘಿಸಿದರೆ ಎದುರಾಗಬಹುದಾದ ಕಾನೂನು ತೊಡಕುಗಳ ಕುರಿತು ಯೋಚಿಸಿ, ಮುಂದೇನು ಮಾಡಬಹುದು ಎಂಬ ನಿರ್ಧಾರಕ್ಕೆ ಬನ್ನಿ.. ನಿಮ್ಮೆಲ್ಲ ಸಮಸ್ಯೆಗಳೂ ಶೀಘ್ರ ಪರಿಹಾರವಾಗಲಿ ಎಂದು ಲೀಗಲ್ ಸಮಾಚಾರದ ವತಿಯಿಂದ ಆಶಿಸುತ್ತೇವೆ..

    Reply
  • - Jagan Ramesh

    ಕೋರ್ಟ್ ಈಗ ಯಾರ ಪರವಾಗಿ ಅಥವಾ ವಿರುದ್ಧವಾಗಿ ಆದೇಶ ನೀಡಿಲ್ಲ. ಸದ್ಯ ಸರ್ಕಾರ ಹಾಗೂ ಕಾರ್ಮಿಕರ ನಡುವೆ ಸಂಧಾನ ಮಾತುಕತೆ ನಡೆಯುತ್ತಿರುವ ಕಾರಣ ಅದು ಮುಂದುವರಿದು, ಸೂಕ್ತ ತೀರ್ಮಾನ ಕೈಗೊಳ್ಳುವಂತಾಗಲಿ ಎಂದಷ್ಟೇ ಹೇಳಿದೆ. ಸರ್ಕಾರದೊಂದಿಗೆ ಮಾತುಕತೆ ಫಲಿಸದೇ ಇದ್ದಾಗ ನಿಮಗೂ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶ ಇದ್ದೇ ಇದೆ. ಆಗಸ್ಟ್ 28ರಂದು ಸಂಧಾನ ಸಭೆಯ ಫಲಿತಾಂಶ ಏನಾಗಲಿದೆ ಎಂದು ಕಾದು ನೋಡಿ. ನಿಮ್ಮ ಸಮಸ್ಯೆ ಶೀಘ್ರ ಬಗೆಹರಿಯುವಂತಾಗಲಿ. ಅಲ್ಲಿಯವರೆಗೆ ದುಡುಕಬೇಡಿ.. ಮುಂದೆ ಎದುರಾಗಬಹುದಾದ ಕಾನೂನು ಸಂಕಷ್ಟಗಳ ಬಗ್ಗೆ ತಿಳಿದುಕೊಳ್ಳಿ.. ನಿಮ್ಮ ವಕೀಲರೊಂದಿಗೆ ಚರ್ಚಿಸಿ, ಮುಂದಿನ ಹೆಜ್ಜೆ ಇಡಿ..

    Reply
  • - Amaresh

    ಕೋಟ್ ನವರಿಗೆ ಅವರ ಕಷ್ಟ ನಿಮಗೆ ಅರ್ಥ ಆಗಲ್ಲ, ಕ್ರಿಯಾ ಸಮಿತಿಗೆ ಕೊಟ್ಟಂತಹ ನೋಟಿಸ್ ಅನ್ನು ಸರ್ಕಾರಕ್ಕೆ ಕೂಡ ಬೇಡಿಕೆಯನ್ನು ಈಡೇರಿಸಬೇಕೆಂದು ನೋಟಿಸ್ ಕೊಡಿ.

    Reply
    • - Jagan Ramesh

      ಪ್ರತಿಭಟನೆ ಮಾಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುತ್ತದೆಯೇ? ಎಸ್ಮಾ ಜಾರಿಯಲ್ಲಿರುವ ಕಾರಣ, ಈಗಿರುವ ಸಮಸ್ಯೆಗಳ ಜತೆ ಕಾನೂನು ಸಂಕಷ್ಟಗಳೂ ಎದುರಾಗುತ್ತವೆ‌. ಕ್ರಿಮಿನಲ್ ಕೇಸ್ ಬೀಳುವ ಜತೆಗೆ, ಕೆಲಸವನ್ನೇ ಕಳೆದುಕೊಳ್ಳಬಹುದು. ದುಡುಕಿ ನಿರ್ಧಾರ ಕೈಗೊಳ್ಳಬೇಡಿ. ನಿಮ್ಮ ಸಂಘಟನೆಯವರೆಲ್ಲ ಸೇರಿ, ವಕೀಲರೊಂದಿಗೆ ಚರ್ಚಿಸಿ, ಎಸ್ಮಾ ಕಾಯ್ದೆಯಲ್ಲಿ ಹೇಳಲಾಗಿರುವ ವಿಚಾರಗಳು, ಅವುಗಳನ್ನು ಉಲ್ಲಂಘಿಸಿದರೆ ಎದುರಾಗಬಹುದಾದ ಕಾನೂನು ತೊಡಕುಗಳ ಕುರಿತು ಯೋಚಿಸಿ, ಮುಂದೇನು ಮಾಡಬಹುದು ಎಂಬ ನಿರ್ಧಾರಕ್ಕೆ ಬನ್ನಿ.. ನಿಮ್ಮೆಲ್ಲ ಸಮಸ್ಯೆಗಳೂ ಶೀಘ್ರ ಪರಿಹಾರವಾಗಲಿ ಎಂದು ಲೀಗಲ್ ಸಮಾಚಾರದ ವತಿಯಿಂದ ಆಶಿಸುತ್ತೇವೆ..

      Reply
  • - ಹರೀಶ ಎ ಬಿ

    ಪೂಜ್ಯ ಗೌರವಾನ್ವಿತ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳವರಿಗೆ ನನ್ನ ನಮಸ್ಕಾರಗಳು ಸರ್ ನೊಂದ ಸಾರಿಗೆ ನೌಕರರ ಗೋಳು ಆಲಿಸಿ ಸರ್ಕಾರಿ ನೌಕರರುಗಳಿಗೆ ಕೊಡುವ ವೇತನದಂತೆ ನಮಗೂ ಸರಿಸಮಾನವಾದ ವೇತನವನ್ನು ಜಾರಿಗೆ ಮಾಡುವಂತೆ ಆದೇಶಿಸ ಬೇಕೆಂದು ತಮ್ಮಲ್ಲಿ ಕೈ ಮುಗಿದು ವಿನಂತಿ ಮಾಡಿಕೊಳ್ಳುತ್ತೇನೆ ಸರ್ ಕೈಗಾರಿಕಾ ಒಪ್ಪಂದದ ಪ್ರಕಾರ ಪ್ರತಿ 4 ವರ್ಷಗಳಿಗೊಮ್ಮೆ ವೇತನ ಜಾಸ್ತಿ ಮಾಡಿಕೊಳ್ಳಲು ಬಸ್ಸುಗಳನ್ನು ನಿಲ್ಲಿಸಿ ಮುಷ್ಕರ ಮಾಡಿ ವೇತನ ಕೇಳುವಂತಹ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಸರ್ . ನಮಗೂ ಸ್ವಾಭಿಮಾನದಿಂದ ಬದುಕುವ ಹಕ್ಕನ್ನು ದಯಪಾಲಿಸಬೇಕೆಂದು ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ ಸರ್ ನಾವು ಸಾರಿಗೆ ನೌಕರರು ಪ್ರತಿ 4 ವರ್ಷಗಳಿಗೊಮ್ಮೆ ಬಸ್ ಬಂದ್ ಮಾಡಿ ಮುಷ್ಕರ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ನಮ್ಮ ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು ಹಾಗೂ ಸರ್ಕಾರಕ ಮುಜುಗರ ಕೀಡಾಗುವುದು ನಮ್ಮ ನೌಕರರು ಸಸ್ಪೆಂದು ಡಿಸ್ಮಿಸ್ ವರ್ಗಾವಣೆ ದಂಡ ತೆರುವುದು ಇತ್ಯಾದಿ ಸಂಕಷ್ಟಗಳಿಂದ ಸಮಸ್ಯೆಗಳಿಂದ ದೂರ ಮಾಡಿ ಉತ್ತಮ ಸಾರಿಗೆ ಸೇವಾ ಸೌಲಭ್ಯಗಳನ್ನು ಕೊಡಲು ನೌಕರರ ಕುಟುಂಬಗಳ ಆರೋಗ್ಯಕರ ಜೀವನವನ್ನು ನಡೆಸಲು ನಮ್ಮ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರ ಸರಿ ಸಮಾನವಾದ ವೇತನವನ್ನು ಜಾರಿ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ನಮ್ಮ ಸಾರಿಗೆ ನೌಕರ ಪಾಲಿನ ದೇವರಾಗಬೇಕೆಂದು ಮಾನ್ಯ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಪಾದಗಳಿಗೆ ನಮಸ್ಕರಿಸುತ್ತಾ ನನ್ನ ಬೇಡಿಕೆ ತಪ್ಪಾಗಿದ್ದರೆ ಕ್ಷಮಿಸಬೇಕೆಂದು ತಮ್ಮಲ್ಲಿ ಕೈಮುಗುದು ಕೇಳಿಕೊಳ್ಳುತ್ತೇನೆ ಸರ್ 🙏🙏🙏

    Reply
    • - Jagan Ramesh

      ಕೋರ್ಟ್ ಈಗ ಯಾರ ಪರವಾಗಿ ಅಥವಾ ವಿರುದ್ಧವಾಗಿ ಆದೇಶ ನೀಡಿಲ್ಲ. ಸದ್ಯ ಸರ್ಕಾರ ಹಾಗೂ ಕಾರ್ಮಿಕರ ನಡುವೆ ಸಂಧಾನ ಮಾತುಕತೆ ನಡೆಯುತ್ತಿರುವ ಕಾರಣ ಅದು ಮುಂದುವರಿದು, ಸೂಕ್ತ ತೀರ್ಮಾನ ಕೈಗೊಳ್ಳುವಂತಾಗಲಿ ಎಂದಷ್ಟೇ ಹೇಳಿದೆ. ಸರ್ಕಾರದೊಂದಿಗೆ ಮಾತುಕತೆ ಫಲಿಸದೇ ಇದ್ದಾಗ ನಿಮಗೂ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶ ಇದ್ದೇ ಇದೆ. ಆಗಸ್ಟ್ 28ರಂದು ಸಂಧಾನ ಸಭೆಯ ಫಲಿತಾಂಶ ಏನಾಗಲಿದೆ ಎಂದು ಕಾದು ನೋಡಿ. ನಿಮ್ಮ ಸಮಸ್ಯೆ ಶೀಘ್ರ ಬಗೆಹರಿಯುವಂತಾಗಲಿ. ಅಲ್ಲಿಯವರೆಗೆ ದುಡುಕಬೇಡಿ.. ಮುಂದೆ ಎದುರಾಗಬಹುದಾದ ಕಾನೂನು ಸಂಕಷ್ಟಗಳ ಬಗ್ಗೆ ತಿಳಿದುಕೊಳ್ಳಿ.. ನಿಮ್ಮ ವಕೀಲರೊಂದಿಗೆ ಚರ್ಚಿಸಿ, ಮುಂದಿನ ಹೆಜ್ಜೆ ಇಡಿ..

      Reply

Leave a Comment