ಹೈಕೋರ್ಟ್ ಕಲಾಪಗಳ ವಿಡಿಯೋ ಕಾನ್ಫರೆನ್ಸಿಂಗ್‌ಗೆ ಹೊಸ ವಿಕನ್ಸೋಲ್ ಪ್ಲಾಟ್‌ಫಾರಂ; ಫೆ.10ರಿಂದ ಜಾರಿ
- by Jagan Ramesh
- February 7, 2025
- 53 Views

ಬೆಂಗಳೂರು: ರಾಜ್ಯ ಹೈಕೋರ್ಟ್‌ನ ವಿಡಿಯೋ ಕಾನ್ಫರೆನ್ಸಿಂಗ್ ಕಲಾಪಗಳು ಇನ್ನು ಮುಂದೆ ಹೊಸ ವಿಕನ್ಸೋಲ್ (Vconsol-Karnataka High Court) ವೇದಿಕೆಯ ಮೂಲಕ ನಡೆಯಲಿವೆ.
ಹೈಕೋರ್ಟ್‌ನ ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ ಎಲ್ಲ ನ್ಯಾಯಾಲಯಗಳ ವಿಡಿಯೋ ಕಾನ್ಫರೆನ್ಸಿಂಗ್ ಫೆಬ್ರವರಿ 10ರಿಂದ ಹಾಲಿ ಇರುವ ಝೂಮ್ ಪ್ಲಾಟ್‌ಫಾರಂಗೆ ಬದಲಿಗೆ ವಿಕನ್ಸೋಲ್ ಪ್ಲಾಟ್‌ಫಾರಂ ಮೂಲಕ ನಡೆಯಲಿವೆ ಎಂದು ಹೈಕೋರ್ಟ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಮೊದಲು ಧಾರವಾಡ ಪೀಠದಲ್ಲಿ ವಿಕನ್ಸೋಲ್ ಅನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಿದ ಬಳಿಕ ಇದೀಗ ಎಲ್ಲ ನ್ಯಾಯಾಲಯಗಳಿಗೂ ವಿಸ್ತರಿಸಲಾಗಿದೆ.
ವಕೀಲರು, ಕಕ್ಷಿದಾರರು, ಸರ್ಕಾರಿ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಕೋರ್ಟ್ ಕಲಾಪಗಳನ್ನು ವೀಕ್ಷಿಸಲು ಮತ್ತು ಅದರಲ್ಲಿ ಭಾಗಿಯಾಗಲು ಹೊಸ ವಿಕನ್ಸೋಲ್ ವೇದಿಕೆಯಲ್ಲಿ ಹೇಗೆ ನೋಂದಾಯಿಸಿಕೊಳ್ಳಬೇಕು ಎಂಬ ಮಾಹಿತಿ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದ್ದು, ಅದು ಹೈಕೋರ್ಟ್ ವೆಬ್‌ಸೈಟ್‌ನಲ್ಲಿ (https://karnatakajudiciary.kar.nic.in/newwebsite/) ಲಭ್ಯವಿದೆ.
Related Articles
Thank you for your comment. It is awaiting moderation.
Comments (0)